ಆಧಾರ್ ಅಪ್ಡೇಟ್‌ಗೆ ಹೊಸ ನಿಯಮ, ಇನ್ಮುಂದೆ ಈ 4 ಡಾಕ್ಯುಮೆಂಟ್ ಕಡ್ಡಾಯ!

ಆಧಾರ್ ಅಪ್ಡೇಟ್‌ಗೆ ಹೊಸ ನಿಯಮ, ಇನ್ಮುಂದೆ ಈ 4 ಡಾಕ್ಯುಮೆಂಟ್ ಕಡ್ಡಾಯ!

2025–26ರ ಆಧಾರ್ ಅಪ್ಡೇಟ್ ಪ್ರಕ್ರಿಯೆಗೆ ಯುಐಡಿಎಐ ಹೊಸ ನಿಯಮ ಹೊರಡಿಸಿದ್ದು, ಹೆಸರು, ವಿಳಾಸ, ಮೊಬೈಲ್ ಬದಲಾವಣೆಗಳಿಗೆ ನಾಲ್ಕು ಪ್ರಮುಖ ದಾಖಲೆಗಳು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದೆ.

ಹೆಸರು, ವಿಳಾಸ, ಜನ್ಮದಿನಾಂಕ ಬದಲಾಯಿಸಲು ಹೊಸ ನಿಯಮ
UIDAI ಹೊರಡಿಸಿದ ದಾಖಲಾತಿಗಳ ಪಟ್ಟಿ ಪ್ರಕಟ
4 ಕಡ್ಡಾಯ ಡಾಕ್ಯುಮೆಂಟ್‌ಗಳಿಲ್ಲದೆ ಅಪ್ಡೇಟ್ ಸಾಧ್ಯವಿಲ್ಲ

ಒಂದಕ್ಕಿಂತ ಹೆಚ್ಚು ಆಧಾರ್‌ (Aadhaar) ಕಾರ್ಡ್ ನಿಮ್ಮ ಹೆಸರಿನಲ್ಲಿ ಇದ್ದರೆ ಸಮಸ್ಯೆಗೆ ಗುರಿಯಾಗಬಹುದು. ಯುಐಡಿಎಐ (UIDAI) ಸ್ಪಷ್ಟಪಡಿಸಿದಂತೆ, ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಇರುವುದು ನಿಯಮಬಾಹಿರ. ಇಂತಹ ಸಂದರ್ಭದಲ್ಲಿ ಮೊದಲ ಆಧಾರ್ ನಂಬರ್ ಮಾತ್ರ ಮಾನ್ಯವಾಗುತ್ತದೆ ಮತ್ತು ಉಳಿದ ಕಾರ್ಡ್‌ಗಳು ರದ್ದಾಗಬಹುದು ಎಂಬುದಾಗಿ ತಿಳಿಸಿದೆ.

ಹೆಸರು, ವಿಳಾಸ ಅಥವಾ ಜನ್ಮದಿನಾಂಕದಲ್ಲಿ ತಪ್ಪಿದ್ದರೆ ಅಥವಾ ಮೊಬೈಲ್ ನಂಬರ್ ಅಪ್ಡೇಟ್ ಮಾಡಬೇಕಾದರೆ ಈಗ ಹೊಸ ನಿಯಮಗಳನ್ನೇ ಅನುಸರಿಸಬೇಕಿದೆ.

2025–26ನೇ ಸಾಲಿನ ಆಧಾರ್ ಅಪ್ಡೇಟ್ ಪ್ರಕ್ರಿಯೆಗೆ ಯುಐಡಿಎಐ ಹೊಸ ಡಾಕ್ಯುಮೆಂಟ್ ಪಟ್ಟಿ ಪ್ರಕಟಿಸಿದೆ. ಇವುಗಳಿಲ್ಲದೆ ಯಾವ ಅಪ್ಡೇಟ್ ಪ್ರಕ್ರಿಯೆಯೂ ಮುಂದುವರೆಯದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈಗ ಆಧಾರ್‌ (Aadhaar) ಅದೆಷ್ಟು ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಬ್ಯಾಂಕ್ ಖಾತೆ ಓಪನ್ ಮಾಡುವುದರಿಂದ ಹಿಡಿದು ಸಿಮ್‌ಕಾರ್ಡ್ (SIM card) ಖರೀದಿ, ಸರ್ಕಾರಿ ಸೌಲಭ್ಯ (government scheme), ಪಿಂಚಣಿ ಯೋಜನೆ (pension plan) ಎಲ್ಲಾ ಕಡೆ ಆಧಾರ್ ಅನಿವಾರ್ಯವಾಗಿದೆ.

ಅದರಲ್ಲೂ ಹೆಸರಿನಲ್ಲಿ ಸಣ್ಣ ತಪ್ಪುಗಳು ಇದ್ದರೆ ಅಥವಾ ವಿಳಾಸ ಬದಲಾವಣೆ ಬೇಕಾದರೆ, ಯುಐಡಿಎಐನ ನವೀನ ನಿಯಮಗಳು ಬಹುಮುಖ್ಯವಾಗಿವೆ.

ಈ ಹೊಸ ನಿಯಮಗಳ ಪ್ರಕಾರ ನೀವು ಯಾವುದೇ ಪ್ರಕಾರದ ಅಪ್ಡೇಟ್ ಮಾಡಬೇಕಾದರೆ ಈ ನಾಲ್ಕು ದಾಖಲೆಗಳಲ್ಲಿ ಒಂದೊಂದು ವಿಭಾಗದ ದಾಖಲೆಗಳಿದ್ದರೆ ಸಾಕು:

ಐಡೆಂಟಿಡಿ ಪ್ರೂಫ್ (Identity Proof) – ಪಾಸ್‌ಪೋರ್ಟ್, ಪಾನ್ ಕಾರ್ಡ್, ఓಟರ್ ಐಡಿ (voter ID), ಡ್ರೈವಿಂಗ್ ಲೈಸೆನ್ಸ್, ಸರ್ಕಾರಿ ಸಂಸ್ಥೆ ನೀಡಿದ ಫೋಟೋ ಐಡಿಯಲ್ಲಿ ಯಾವುದಾದರೂ ಒಂದು.

ವಿಳಾಸ ದೃಢೀಕರಣ (Address Proof) – ವಿದ್ಯುತ್ ಬಿಲ್, ಬ್ಯಾಂಕ್ ಪಾಸ್‌ಬುಕ್, ರೇಶನ್ ಕಾರ್ಡ್, ರಿಜಿಸ್ಟರ್ಡ್ ಬಾಡಿಗೆ ಒಪ್ಪಂದ, ಡ್ರೈವಿಂಗ್ ಲೈಸೆನ್ಸ್, ನೀರಿನ ಅಥವಾ ಗ್ಯಾಸ್ ಬಿಲ್ (3 ತಿಂಗಳ ಒಳಗಿನದು).

ಜನ್ಮದಿನಾಂಕ ದೃಢೀಕರಣ (Date of Birth Proof) – ಜನ್ಮ ಪ್ರಮಾಣಪತ್ರ, ಶಾಲಾ ಮಾರ್ಕ್‌ಶೀಟ್, ಪಾಸ್‌ಪೋರ್ಟ್, ಪಿಂಚಣಿ ದಾಖಲೆ.

ರಿಲೇಷನ್‌ಶಿಪ್ ಪ್ರೂಫ್ (Proof of Relationship) – ಕುಟುಂಬ ಸದಸ್ಯರೊಂದಿಗೆ ಸಂಬಂಧವನ್ನು ತೋರಿಸಲು ಬಳಸಲಾಗುತ್ತದೆ, ಅಗತ್ಯವಿದ್ದಾಗ ಮಾತ್ರ.

ಹೊಸ ನಿಯಮಗಳ ಪ್ರಕಾರ ಭಾರತೀಯ ನಾಗರಿಕರು, ಎನ್‌ಆರ್‌ಐಗಳು (NRI), 5 ವರ್ಷ ಮೇಲ್ಪಟ್ಟ ಮಕ್ಕಳು, ಮತ್ತು ಭಾರತದಲ್ಲಿ ದೀರ್ಘಕಾಲ ವಾಸಿಸುತ್ತಿರುವ ಪರದೇಶಿಗರು ಅಥವಾ ಓಸಿಐ (OCI) ಕಾರ್ಡ್‌ ಹೊಂದಿರುವವರು ತಮ್ಮ ಪಾಸ್‌ಪೋರ್ಟ್, ವೀಸಾ ಅಥವಾ ರೆಸಿಡೆನ್ಸಿ ಪರ್ಮಿಟ್ (residency permit) ಅಡಿಯಲ್ಲಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಬೇಕು.

UIDAI ವೆಬ್‌ಸೈಟ್‌ (uidai.gov.in) ನಲ್ಲಿ ಆಸಕ್ತರು ಆನ್‌ಲೈನ್ ಮೂಲಕ ಅಪ್ಡೇಟ್ ಮಾಡಬಹುದು ಅಥವಾ ಆಸುಪಾಸಿನ ಆಧಾರ್ ಸೆಂಟರ್‌ಗೆ ಭೇಟಿ ನೀಡಿ ಸೇವೆ ಪಡೆಯಬಹುದು.

ಯಾವುದೇ ತೊಂದರೆ ಇಲ್ಲದೆ ತ್ವರಿತವಾಗಿ ಆಧಾರ್ ಸೇವೆ ಪಡೆಯಲು ಮೇಲ್ಕಂಡ ಡಾಕ್ಯುಮೆಂಟ್‌ಗಳನ್ನು ರೆಡಿ ಇಟ್ಟುಕೊಳ್ಳುವುದು ಸೂಕ್ತ.

Leave a Comment