SSY: ನಿಮ್ಮ ಮಗಳ ಹೆಸರಲ್ಲಿ ಒಳ್ಳೆಯ ಯೋಜನೆ ಬೇಕೇ? ಆದರೆ ಈ ಯೋಜನೆಯಲ್ಲಿ ಖಾತೆ ತೆರೆಯಿರಿ.!
ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ (SSY) ಮೂಲಕ ಮಕ್ಕಳ ಭವಿಷ್ಯ ಭದ್ರತೆ ಸಾಧ್ಯ. ಕಡಿಮೆ ಮೊತ್ತದಿಂದ ಪ್ರಾರಂಭಿಸಿ, ಹೆಚ್ಚು ಬಡ್ಡಿ, ಟ್ಯಾಕ್ಸ್ ಮುಕ್ತ ಮಚ್ಯೂರಿಟಿ ಲಾಭ ಪಡೆಯಬಹುದು.
SSY ಯೋಜನೆ ಮೂಲಕ ಮಗಳ ಭವಿಷ್ಯ ಭದ್ರತೆ
ತಿಂಗಳಿಗೆ ₹1000 ಹೂಡಿಕೆ ಮಾಡಿದರೆ 21ನೇ ವರ್ಷಕ್ಕೆ ₹5.5 ಲಕ್ಷ
ಈ ಯೋಜನೆಗೆ 8.2% ಬಡ್ಡಿ, ಟ್ಯಾಕ್ಸ್-ಫ್ರೀ ಲಾಭ, ಕಡಿಮೆ ಡಿಪಾಸಿಟ್
ಇಂದಿನ ಕಾಲದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಹಣ ಸೇವ್ ಮಾಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ (SSY – Sukanya Samriddhi Yojana) ಎಲ್ಲ ತಾಯಂದಿರಿಗೂ ಆಶಾಕಿರಣವಾಗಿದೆ. ಹತ್ತಿರದ ಪೋಸ್ಟ್ ಆಫೀಸ್ ಗಳಲ್ಲಿ ಈ ಖಾತೆ ಪ್ರಾರಂಭಿಸಬಹುದು.
ಈ ಯೋಜನೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಅಭಿಯಾನದ ಭಾಗವಾಗಿ ಜಾರಿಗೆ ಬಂದು ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಖರ್ಚಿಗೆ ನೆರವಾಗುವಂತೆ ರೂಪಿಸಲಾಗಿದೆ.
SSY ಯೋಜನೆ (scheme) ಅಡಿಯಲ್ಲಿ ಒಂದು ಮಗಳ ಹೆಸರಲ್ಲಿ ಮಾತ್ರ ಖಾತೆ ತೆರೆಯಬಹುದಾಗಿದೆ. ತಿಂಗಳಿಗೆ ₹1000 ಹೂಡಿಕೆ ಮಾಡಿದರೆ 21ನೇ ವರ್ಷದ ವೇಳೆಗೆ ₹5.5 ಲಕ್ಷದಷ್ಟು ಹಣವೂ ಸಿಗಬಹುದು.
ಹೆಚ್ಚಿನ ಬಡ್ಡಿದರವೇ ಈ ಯೋಜನೆಯ ವಿಶೇಷತೆ. ಪ್ರಸ್ತುತ SSY ಬಡ್ಡಿದರ ವರ್ಷಕ್ಕೆ 8.2% (interest rate) ಆಗಿದೆ. ಇವು ಮಾರುಕಟ್ಟೆಯಲ್ಲಿ ಇರುವ ಸಾಮಾನ್ಯ ಬ್ಯಾಂಕುಗಳ ಫಿಕ್ಸೆಡ್ ಡಿಪಾಸಿಟ್ ಗಿಂತ (Fixed Deposit) ಹೆಚ್ಚು ಲಾಭದಾಯಕವಾಗಿದೆ. ಮತ್ತು ಈ ಯೋಜನೆ EEE (Exempt-Exempt-Exempt) ಆಗಿದ್ದು, ಹೂಡಿಕೆ, ಬಡ್ಡಿ, ಮಚ್ಯೂರಿಟಿ ಲಾಭ – ಎಲ್ಲವೂ ತೆರಿಗೆ ಮುಕ್ತ.
ನಿಮ್ಮ ಮಗಳಿಗಾಗಿ ನೀವು ವರ್ಷಕ್ಕೆ ₹12,000 ಹೂಡಿದರೆ, 15 ವರ್ಷಗಳವರೆಗೆ ₹1,80,000 ಮೊತ್ತ ಹೂಡಿಕೆಯಾಗುತ್ತದೆ. ಈ ಮೊತ್ತದ ಮೇಲೆ ಬಡ್ಡಿಯಾಗಿ ₹3,74,206 ಸಿಗಲಿದೆ. ಒಟ್ಟು ಮಚ್ಯೂರಿಟಿ ಮೊತ್ತ ₹5,54,206 ಆಗುತ್ತದೆ.
ಖಾತೆ ಆರಂಭಿಸಲು ಬೇಕಾದ ದಾಖಲೆಗಳಲ್ಲಿ ಮಗಳ ಜನನ ಪ್ರಮಾಣಪತ್ರ, ಪೋಷಕರ ಗುರುತಿನ ಪುರಾವೆ (Aadhaar, PAN), ವಿಳಾಸದ ದಾಖಲೆಗಳು ಹಾಗೂ ಫೋಟೋ ಸೇರಿವೆ. ಖಾತೆ ಆರಂಭಕ್ಕೆ ಕನಿಷ್ಠ ₹250 ಬೇಕಾಗುತ್ತದೆ. ವರ್ಷಕ್ಕೊಮ್ಮೆ ಕನಿಷ್ಠ ₹250 ಹಾಕಬೇಕಾಗಿದ್ದು, ಗರಿಷ್ಠ ₹1.5 ಲಕ್ಷವರೆಗೆ ಹೂಡಿಕೆ ಮಾಡಬಹುದು.
15 ವರ್ಷಗಳವರೆಗೆ ಮಾತ್ರ ಹಣ ಹಾಕಬೇಕಾಗಿದ್ದು, 21ನೇ ವರ್ಷದಲ್ಲಿ ಮಚ್ಯೂರಿಟಿ ಲಭಿಸುತ್ತದೆ. ಮಧ್ಯಂತರದಲ್ಲಿ ಬಡ್ಡಿ ನಿರಂತರವಾಗಿ ಲಭ್ಯವಾಗುತ್ತದೆ. ಮಗಳು 18 ವರ್ಷ ದಾಟಿದ ಮೇಲೆ ವಿದ್ಯಾಭ್ಯಾಸ ಅಥವಾ ಮದುವೆಗೆ 50% ಮೊತ್ತವರೆಗೆ ಹಣವನ್ನು ಹಿಂದಕ್ಕೆ ಪಡೆಯಬಹುದು.
ಮಧ್ಯಮ ವರ್ಗದ ಪಾಲಕರಿಗೆ ಈ ಯೋಜನೆ ಬಹುಮೌಲ್ಯದ ಹೂಡಿಕೆಯಾಗಬಹುದು. ನಿಮ್ಮ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸಲು ಈಗಲೇ ಈ ಯೋಜನೆಯಲ್ಲಿ ಪಾಲ್ಗೊಳ್ಳಿ.